ಸ್ಟೆಫನಿ "ಸ್ಟೆಫಿ" ಡಿ'ಸೋಜಾ (೨೬ ಡಿಸೆಂಬರ್ ೧೯೩೬ - ೧೧ ಸೆಪ್ಟೆಂಬರ್ ೧೯೯೮) ಅವರು ಅಥ್ಲೆಟಿಕ್ಸ್ ಮತ್ತು ಮಹಿಳಾ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಒಬ್ಬ ಭಾರತೀಯ ಕ್ರೀಡಾಪಟು. == ವೃತ್ತಿಜೀವನ == ಇವರ ವಿದ್ಯಾಭ್ಯಾಸ ಸರ್ದಾರ್ ದಸ್ತುರ್ ಬಾಲಕಿಯರ ಶಾಲೆಯಲ್ಲಿ ನಡೆಯಿತು. ಇವರು ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿ ಪಡೆದರು. ತದನಂತರ ಇವರು ಕೇಂದ್ರ ರೈಲ್ವೆಯ ಪುಣೆ ವಿಭಾಗದಲ್ಲಿ ಕೆಲಸ ಮಾಡಿದರು. ಆನಂತರ ಮದುವೆಯಾಗಿ ಜಮ್ಶೆಡ್‌ಪುರಕ್ಕೆ ಸ್ಥಳಾಂತಗೊಂಡರು. ಅವರು ಸುಮಾರು ೫ ಅಡಿ ೨ ಇಂಚು ಉದ್ದವಿದ್ದರು ಮತ್ತು ೫೦ ಕೆಜಿ ತೂಕವಿದ್ದರು. ಅವರನ್ನು ಫ್ಲೈಯಿಂಗ್ ರಾಣಿ ಎಂದು ಕರೆಯುತ್ತಿದ್ದರು. == ಸಾಧನೆ == ಇವರು ೧೯೫೪ ರಲ್ಲಿ ಮನಿಲಾ ಏಷ್ಯನ್ ಕ್ರೀಡಾಕೂಟದಲ್ಲಿ ೪*೪೦೦ ಮೀಟರ್ ರಿಲೇ ಯಲ್ಲಿ ಚಿನ್ನದ ಪದಕವನ್ನು ಗೆದ್ದರು. ಆ ಸ್ಪರ್ಧೆಯಲ್ಲಿ ಇವರು ಜಪಾನಿನ ಒಟಗಾರನಿಂದ ೪ ಮೀಟರ್‌ಗಳಷ್ಟು ಮುನ್ನಡೆ ಸಾಧಿಸಿದ್ದರು. , ಕ್ರಿಸ್ಟಿನ್ ಬ್ರೌನ್ ಮತ್ತು ಮೇರಿ ಡಿ'ಸೋಜಾ ಅವರ ತಂಡದ ಇತರ ಸದಸ್ಯರಾಗಿದ್ದರು. ಅವರು ೧೯೫೮ ರಲ್ಲಿ ಟೊಕಿಯೊದಲ್ಲಿ ನಡೆದ ೨೦೦ ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನದಲ್ಲಿದ್ದರು. ಅವರು ೪*೧೦೦ ಮೀ ರಿಲೇ ತಂಡದ ಸದಸ್ಯರಾಗಿದ್ದರು ಮತ್ತು ಅದರಲ್ಲಿ ಮೂರನೇ ಸ್ಥಾನವನ್ನು ಗಳಿಸಿದರು. ಅದೇ ವರ್ಷ ಕಾರ್ಡಿಷ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವರು ದೇಶಕ್ಕಾಗಿ ಆಡಿದರು. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಉದ್ದ ಜಿಗಿತದಲ್ಲಿ ಚಿನ್ನದ ಪದಕವನ್ನು ಗೆದ್ದಾಗ ಸ್ಟೀಫಿ ಡಿ'ಸೋಜಾ ಅವರು ೧೯೫೩ರಲ್ಲಿ ೧೬ ವರ್ಷದ ಶಾಲಾ ವಿದ್ಯಾರ್ಥಿಯಾಗಿ ರಾಷ್ಟ್ರೀಯವಾಗಿ ಮಿಂಚಿದ್ದರು. ಅಲ್ಲಿಂದ ಅವರು ಸುಮಾರು ೧೨ ವರ್ಷಗಳ ಕಾಲ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಈ ಅವಧಿಯಲ್ಲಿ ಅವರು ೧೦೦ ಮೀ, ೨೦೦ ಮೀ ,೪೦೦ ಮೀ ಮತ್ತು ೮೦೦ ಮೀ ನಲ್ಲಿ ರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದರು. ಅವರು ಮೊದಲ ಬಾರಿಗೆ ೧೯೫೪ ರಲ್ಲಿ ೨೦೦ ಮೀ ಓಟದಲ್ಲಿ ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ೧೯೬೧ ರಲ್ಲಿ ೧೦೦ ಮೀಟರ್‌ ಓಟದಲ್ಲಿ ೧೨.೨ ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ನಂತರ ಅವರು ೧೯೬೪ರಲ್ಲಿ ೪೦೦ ಮೀಟರ್ ಮತ್ತು ೮೦೦ ಮೀಟರ್ ಓಟದ ಸ್ಪರ್ಧೆಗಳಲ್ಲಿ ಹೊಸ ಅಂಕಗಳನ್ನು ಸೃಷ್ಟಿಸಿದರು. ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ೪೦೦ ಮೀಟರ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅವರು ಆಯ್ಕೆಗೊಂಡರು. ಸ್ಟೇಫೀ ಡಿ ಸೋಜಾ ದೇಶಕ್ಕಾಗಿ ಹಾಕಿ ಆಡಿದರು. ಅವರು ಎರಡು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ೧೯೫೩ ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಿ ಭಾರತವನ್ನು ಪ್ರತಿನಿಧಿಸಿದರು ಮತ್ತು ೧೯೬೧ ರಲ್ಲಿ ಶ್ರೀಲಂಕಾ ವಿರುದ್ದ ಭಾರತೀಯ ತಂಡದ ನಾಯಕತ್ವ ವಹಿಸಿದರು. == ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳು == == ಪ್ರಶಸ್ತಿಗಳು == ಇವರು ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಮಹಿಳೆಯಾಗಿದ್ದರು. ಅನೇಕ ವರ್ಷಗಳ ಕಾಲ ಆಲ್ ಇಂಡಿಯ ಕಾ ಕೌನ್ಸಿಲ ಫಾರ್ ಸ್ಪೋರ್ಟ್ಸ್‌ನ ಸದಸ್ಯರಾಗಿದ್ದರು. ೧೯೯೮ರಲ್ಲಿ ಅವರು ತಮ್ಮ ೬೧ ನೇ ವಯಸ್ಸಿನಲ್ಲಿ ಜೆಮ್ಶೆಡ್‌ಪುರದಲ್ಲಿ ಕೊನೆಯುಸಿರೆಳೆದರು. == ಉಲ್ಲೇಖಗಳು ==